[ag_menu menu="top menu"]

PM Surya Ghar Yojana Online Apply: ಸರ್ಕಾರದಿಂದ ಮನೆ ಮನೆಗೆ ಉಚಿತ ಸೋಲಾರ್ ವಿದ್ಯುತ್, ಅರ್ಜಿ ಸಲ್ಲಿಕೆ ಹಾಗೂ ಇತರ ಉಪಯುಕ್ತ ಮಾಹಿತಿ..!

Photo of author

[ag_share_buttons]

PM Surya Ghar Yojana Online Apply: ಸರ್ಕಾರದಿಂದ ಮನೆ ಮನೆಗೆ ಉಚಿತ ಸೋಲಾರ್ ವಿದ್ಯುತ್, ಅರ್ಜಿ ಸಲ್ಲಿಕೆ ಹಾಗೂ ಇತರ ಉಪಯುಕ್ತ ಮಾಹಿತಿ..!
ನಿಮ್ಮ ಮನೆಗೆ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳಲು ಬಯಸುತ್ತಿದ್ದೀರಾ, ಅಂತವರಿಗಾಗಿ ಇಲ್ಲಿದೆ ಮಹತ್ವದ ಯೋಜನೆಯದ ಸೂರ್ಯ ಘರ್ ಯೋಜನೆಯಡಿ ಉಚಿತ ಸೋಲಾರ್ ವಿದ್ಯುತ್ ಅಳವಡಿಕೆಯ ಕುರಿತು ಸಂಪೂರ್ಣ ಮಾಹಿತಿ. ಇದೇ ರೀತಿಯ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;


ಸೂರ್ಯ ಘರ್ ಮುಪ್ತ್ ಬಿಜ್ಲಿ ಯೋಜನೆ. Solar Electricity Subsidy

ನಮಗೆಲ್ಲ ತಿಳಿದಿರುವ ಹಾಗೆ ಕೇಂದ್ರ ಸರ್ಕಾರವು 2024ರಲ್ಲಿ ಜಾರಿಗೆ ತಂದ ಯೋಜನೆ ಸೂರ್ಯ ಘರ್ ಮುಪ್ತ್ ಬಿಜ್ಲಿ ಯೋಜನೆ (Solar Electricity Subsidy), ಇದು ಭಾರತದ ಪ್ರತಿ ಕುಟುಂಬಗಳಿಗೂ ಉಚಿತ ವಿದ್ಯುತ್ ನೀಡುವ ಉದ್ದೇಶದಿಂದ ಜಾರಿಯಾಗಿದೆ. ಇದರಲ್ಲಿ ಸರ್ಕಾರವು ಸಾರ್ವಜನಿಕರಿಗೆ ಅಂದರೆ ಯಾರು ತಮ್ಮ ಮನೆ ಮೇಲೆ ಸೋಲಾರ್ ವಿದ್ಯುತ್ ಪನಲ್ ಗಳನ್ನು ಅಳವಡಿಸಿಕೊಂಡು ಉಚಿತ ವಿದ್ಯುತ್ ಪಡೆಯಲು ಬಯಸುವವರು, ಅಂಥವರಿಗೆ ಈ ಯೋಜನೆಯ ಮೂಲಕ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಹಾಗೂ ಈ ರೀತಿಯಾಗಿ ಸೋಲಾರ್ ವಿದ್ಯುತ್ತನ್ನು ಅಳವಡಿಸಿಕೊಂಡ ಕುಟುಂಬಗಳು 20 ವರ್ಷಗಳ ಕಾಲ ಉಚಿತ ವಿದ್ಯುತ್ ಪಡೆಯಬಹುದು.

Railway Ticket Rate Hike: ರೈಲ್ವೆ ಟಿಕೆಟ್ ದರ ಪರಿಷ್ಕರಣೆ ಜುಲೈ 1ರಿಂದ: ಎಷ್ಟು ಹೆಚ್ಚಾಗಿದೆ ಗೊತ್ತಾ?

ಯೋಜನೆಯ ಉದ್ದೇಶ ಮತ್ತು ಗುರಿ. pm surya ghar yojana details in kannada.

PM Surya Ghar Yojana Online Apply
Solar Electricity Subsidy

ಪ್ರಸ್ತುತವಾಗಿ ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ, ಪ್ರತಿಯೊಂದು ಕುಟುಂಬಗಳು ತಮ್ಮ ದಿನನಿತ್ಯದ ವಿದ್ಯುತ್ ಪೂರೈಕೆಯನ್ನು ತಾವೇ ಸ್ವಯಂ ಪೂರೈಸಿಕೊಳ್ಳಬೇಕು ಎಂಬುದು. ಈ ರೀತಿಯಾಗಿ ಸೋಲಾರ್ ವಿದ್ಯುತ್ ಮೂಲಕ ತಮ್ಮ ವಿದ್ಯುತ್ ಪೂರೈಕೆಯನ್ನು ಸ್ವಯಂ ಪೂರೈಸಿಕೊಳ್ಳುವುದರಿಂದ ಪರಿಸರ ಮಾಲಿನ್ಯ ಹಾಗೂ ಅನ್ಯ ವಿದ್ಯುತ್ ಮೂಲಗಳ ಮೇಲೆ ಅವಲಂಬನೆಯು ಕಡಿಮೆಯಾಗುವುದು. ಅಷ್ಟೇ ಅಲ್ಲದೆ ಜನಸಾಮಾನ್ಯರ ಮೇಲೆ ವಿದ್ಯುತ್ ಬಿಲ್  ಹೊರೆ ಕಡಿಮೆಯಾಗುವುದು

  • ದೇಶದಾದ್ಯಾಂತ 1 ಕೋಟಿ ಮನೆಗಳಿಗೆ ಸೌರ ಘಟಕ ಅಳವಡಿಸುವ ಗುರಿ.
  • ಮನೆಗಳಿಗೆ 1-3 KW ಸಾಮರ್ಥ್ಯದ ಘಟಕಗಳು.
  • 5 ವರ್ಷಗಳ ತಾಂತ್ರಿಕ ಉಚಿತ ನಿರ್ವಹಣೆ.
  • 20 ವರ್ಷ ಉಚಿತ ವಿದ್ಯುತ್‌ ಪೂರೈಕೆ.
  • ಹೆಚ್ಚುವರಿ ವಿದ್ಯುತ್ ಮಾರಾಟದ ಮೂಲಕ ಆದಾಯ ಸಂಪಾದನೆ.

ಯೋಜನೆಯ ಪ್ರಮುಖ ಪ್ರಯೋಜನಗಳು

  • 20 ವರ್ಷಗಳ ವರೆಗೆ ಉಚಿತ ವಿದ್ಯುತ್ ಬಳಕೆಗೆ ಅವಕಾಶ
  • ಸರಾಸರಿ ಬಳಕೆಗೆ ಶೂನ್ಯ ವಿದ್ಯುತ್‌ ಬಿಲ್ಲು
  • ಹೆಚ್ಚಾಗಿ ಉತ್ಪಾದಿತ ವಿದ್ಯುತ್ ಅನ್ನು ಡಿಸ್ಕಾಂಗೆ ಮಾರಾಟ ಮಾಡಬಹುದು
  • 5 ವರ್ಷಗಳ ತಾಂತ್ರಿಕ ನಿರ್ವಹಣೆ ಉಚಿತ
  • ಸ್ಥಿರ ಬಳಕೆ ಮತ್ತು ದೀರ್ಘಾವಧಿ ಲಾಭ
  • ₹30,000 –178,000 ಸರ್ಕಾರದಿಂದ ಸಬ್ಸಿಡಿ

ಘಟಕದ ಗಾತ್ರ, ವೆಚ್ಚ ಹಾಗೂ ಸರ್ಕಾರದ ಸಹಾಯಧನ ವಿವರ Solar Electricity Subsidy

ಘಟಕದ ಗಾತ್ರಅಂದಾಜು ವೆಚ್ಚ (₹)ಯೂನಿಟ್ ಉತ್ಪಾದನೆಸರ್ಕಾರದ ಸಬ್ಸಿಡಿ (₹)ವರ್ಷಕ್ಕೆ ಉಳಿತಾಯ (₹)
1 KW₹60,000 – ₹80,000100 ಯೂನಿಟ್₹73,000 ವರೆಗೆ₹9,600* ವರೆಗೆ
2 KW₹1,20,000 – ₹1,60,000200 ಯೂನಿಟ್₹60,000₹21,600* ವರೆಗೆ
3 KW₹1,80,000 – ₹2,40,000300 ಯೂನಿಟ್₹78,000₹36,000* ವರೆಗೆ

ಸೂಚನೆ: ಮೇಲ್ಕಂಡ ಉಳಿತಾಯದ ಅಂಕಿಅಂಶಗಳು ಪ್ರತ್ಯಕ್ಷ ಬಳಕೆಯ ತೀವ್ರತೆ ಮತ್ತು ಸ್ಥಳೀಯ ಹವಾಮಾನದ ಆಧಾರದ ಮೇಲೆ ಬದಲಾಗಬಹುದು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸರಳ ವಿಧಾನ

ಗ್ರಾಮ ಹಾಗೂ ನಗರ ಪ್ರದೇಶದ ಮನೆಯ ಮೇಲ್ಛಾವಣಿಯಲ್ಲಿ ಖಾಲಿ ಜಾಗ ಹೊಂದಿರುವ ಮನೆಮಾಲೀಕರು ತಮ್ಮ ಹೆಸರಿನಲ್ಲಿ ಸೌರಘಟಕ ಸ್ಥಾಪನೆಗೆ ಸರಳವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನಿಮಗೆ ಆಧಾರ್ ಕಾರ್ಡ್, ಇತ್ತೀಚಿನ ವಿದ್ಯುತ್ ಬಿಲ್ ಹಾಗೂ ಬ್ಯಾಂಕ್ ಪಾಸ್‌ಬುಕ್ ಅಗತ್ಯವಿರುತ್ತದೆ.

ಅರ್ಜಿಯ ಪ್ರಕ್ರಿಯೆ:

PM Suryaghar | Rooftop Solar Portal
Ready to explore rooftop solar? Click below to apply.
Apply Now
  • ವೆಬ್‌ಸೈಟ್‌ಗೆ ಹೋಗಿ 👉 pmsuryaghar.gov.in
  • “Apply for Rooftop Solar” ಕ್ಲಿಕ್ ಮಾಡಿ
  • ನಿಮ್ಮ ರಾಜ್ಯ ಮತ್ತು ವಿದ್ಯುತ್ ಪೂರೈಕೆ ಸಂಸ್ಥೆ (Discom) ಆಯ್ಕೆಮಾಡಿ
  • ನಿಮ್ಮ ವಿದ್ಯುತ್ ಗ್ರಾಹಕ ಸಂಖ್ಯೆ (Consumer Number) ನಮೂದಿಸಿ
  • ವೈಯಕ್ತಿಕ ವಿವರಗಳನ್ನು ತುಂಬಿ (ಹೆಸರು, ವಿಳಾಸ ಇತ್ಯಾದಿ)
  • ಬೇಕಾದ ಡಾಕ್ಯುಮೆಂಟ್‌ಗಳನ್ನು (ಆಧಾರ್, ವಿದ್ಯುತ್ ಬಿಲ್, ಪಾಸ್‌ಬುಕ್) ಅಪ್ಲೋಡ್ ಮಾಡಿ
  • “Submit” ಬಟನ್ ಒತ್ತಿ
  • ನಿಮ್ಮ ಅರ್ಜಿ Application Number ಅನ್ನು ಪಡೆದುಕೊಳ್ಳಿ
  • ನಿಮ್ಮ ಅರ್ಜಿಯ ಸ್ಥಿತಿಯನ್ನು ಆ ವೆಬ್‌ಸೈಟ್‌ನಲ್ಲಿಯೇ ನೋಡಿ

ಸೂರ್ಯ ಘರ್‌ ಯೋಜನೆ, ಪ್ರಧಾನ ಮಂತ್ರಿ, ಉಚಿತ ವಿದ್ಯುತ್‌, Free Electricity, Scheme, ಬಿಲ್‌, PM Surya Ghar free electricity

[inline_join_buttons]

[floating_join_buttons]

Leave a Comment