[ag_menu menu="top menu"]

Indian Air Force Recruitment 2025: ಭಾರತೀಯ ವಾಯುಪಡೆಯಲ್ಲಿ 153 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

Photo of author

[ag_share_buttons]

Indian Air Force Recruitment 2025: ಭಾರತೀಯ ವಾಯುಪಡೆಯಲ್ಲಿ 153 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಭಾರತದ ಸುರಕ್ಷಾ ವಲಯದ, ಭಾರತೀಯ ವಾಯುಪಡೆ (IAF -Indian Airforce) ನಲ್ಲಿ ಖಾಲಿ ಇರುವ 153 ಗ್ರೂಪ್ ಸಿ, ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಒಂದು ಹುದ್ದೆಗೆ ಅರ್ಜಿಯನ್ನು ಆಫ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ, ಶೈಕ್ಷಣಿಕ ಅರ್ಹತೆಗಳೇನು, ಇನ್ನಿತರ ವಿಷಯಗಳ ಕುರಿತು ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;

ಹುದ್ದೆಗಳ ವಿವರ: Indian Air Force Group C Recruitment 2025

ಭಾರತೀಯ ವಾಯುಪಡೆ (IAF -Indian Airforce), ನಲ್ಲಿ ಖಾಲಿ ಇರುವ 153 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ (Indian Air Force Recruitment 2025). ಇದರಲ್ಲಿ, ಎಲ್ ಡಿ ಸಿ, ಟೈಪಿಸ್ಟ್, ಕುಕ್, ಸ್ಟೋರ್ ಕೀಪರ್, ಡ್ರೈವರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮೇ 17 ರಿಂದ ಜೂನ್ 16, 2025 ಇದರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು.
ಸಂಸ್ಥೆಯ ಹೆಸರು: ಭಾರತೀಯ ವಾಯುಪಡೆ (IAF -Indian Airforce)
ಹುದ್ದೆಯ ಹೆಸರು: (ಗ್ರೂಪ್ ಸಿ) ಟೈಪಿಸ್ಟ್, ಡ್ರೈವರ್, ಸ್ಟೋರ್ ಕೀಪರ್
ಒಟ್ಟು ಹುದ್ದೆಗಳ ಸಂಖ್ಯೆ: 153
ಉದ್ಯೋಗ ಸ್ಥಳ: ಭಾರತ

BCM ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ. Post Matric BCM Hostel Application 2025. Apply Online

ಶೈಕ್ಷಣಿಕ ವಿದ್ಯಾರ್ಹತೆ: Indian Air Force Recruitment 2025

ಲೋವರ್ ಡಿವಿಜನ್ ಕ್ಲರ್ಕ್ (LDC), ಹಿಂದಿ ಟೈಪಿಸ್ಟ್, ಸ್ಟೋರ್ ಕೀಪರ್ ಹುದ್ದೆಗಳಿಗೆ: 12ನೇ ತರಗತಿ ಉತ್ತೀರ್ಣ
ಕುಕ್ (ಸಾಮಾನ್ಯ ಶ್ರೇಣಿ) ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿ ಜೊತೆಗೆ ಕೆಟರಿಂಗ್ ಪ್ರಮಾಣ ಪತ್ರ
ಕಾರ್ಪೆಂಟರ್, ಪೈಂಟರ್ ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿ ಜೊತೆಗೆ ಸಂಬಂಧಿತ ತರಬೇತಿ
ಮಲ್ಟಿ ಟಾಸ್ಕಿಂಗ್ ಸ್ಟಾಪ್ (MTS), ಮೆಸ್ ಸ್ಟಾಪ್, ಲ್ಯಾಂಡ್ರಿ ಮ್ಯಾನ್, ಹೌಸ್ ಕೀಪಿಂಗ್ ಸ್ಟಾಪ್ ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು
ವಲ್ಕ್ ನೈಸರ್ ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿ ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ತರಬೇತಿಯನ್ನು ಹೊಂದಿರಬೇಕು
ಸಿವಿಲಿಯನ್ ಮೆಕಾನಿಕಲ್ ಟ್ರಾನ್ಸ್ಪೋರ್ಟ್ ಡ್ರೈವರ್ ಹುದ್ದೆಗೆ ಅಭ್ಯರ್ಥಿಗಳು 10ನೇ ತರಗತಿ ಜೊತೆಗೆ ಚಾಲನ ಪ್ರಮಾಣ ಪತ್ರ ಅಂದರೆ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು

Indian Air Force Recruitment 2025
Indian Air Force Recruitment 2025

ವಯೋಮಿತಿ Indian Air Force Recruitment 2025

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ವಯಸ್ಸಿನ ಮಿತಿಯನ್ನು ಹೊಂದಿರಬೇಕಾಗುತ್ತದೆ.
ವಯೋಮಿತಿ ಸಡಲಿಕೆ
ಓಬಿಸಿ ಅಭ್ಯರ್ಥಿಗಳಿಗೆ: 3 ವರ್ಷ
SC/ST ಅಭ್ಯರ್ಥಿಗಳಿಗೆ: 5 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ: 10 ವರ್ಷ ವಯೋಮಿತಿ ಸಡಿಲಿಕ್ಕೆಯನ್ನು ನೀಡಲಾಗಿದೆ.
ಯಾವುದೇ ರೀತಿಯ ಅರ್ಜಿ ಶುಲ್ಕವು ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ

ಈ ಒಂದು ಹುದ್ದೆಗೆ (Indian Air Force Recruitment 2025) ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲನೆಯ ಹಂತದಲ್ಲಿ ಲಿಖಿತ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಂತರದಲ್ಲಿ ಕೌಶಲ್ಯ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಕೆಳಗಿನ ವಿಳಾಸಗಳಿಗೆ 16-ಜೂನ್-2025ರ ಮೊದಲು ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇತರ ಸೇವೆಗಳ ಮೂಲಕ ಅರ್ಜಿಯನ್ನು ಕಳುಹಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ:

West Bengal: Air Officer Commanding, Air Force Station Arjan Singh, Panagarh, West Bengal- 713148
Assam: Air Officer Commanding, Air Force Station, Tezpur, Assam-784104
Haryana: Air Officer Commanding, Air Force Station, Ambala, Ambala Cantt (Haryana), Pin-133001
New Delhi: Air Officer Commanding, Air Force Central Accounts Office (AFCAO), Subroto Park, New Delhi- 110010

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 17/05/2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 16/06/2025

ಪ್ರಮುಖ ಲಿಂಕ್ ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್ : Click here
ಅಧಿಕೃತ ವೆಬ್ಸೈಟ್: Click here

[inline_join_buttons]

[floating_join_buttons]

Leave a Comment