[ag_menu menu="top menu"]

Benefits Of Eating Garlic : ದಿನಕ್ಕೆರಡು ಬೆಳ್ಳುಳ್ಳಿ ಸಂಸಾರಿಕ ಜೀವನದ ಗುಟ್ಟು.

Photo of author

[ag_share_buttons]

Benefits Of Eating Garlic : ದಿನಕ್ಕೆರಡು ಬೆಳ್ಳುಳ್ಳಿ ಸಂಸಾರಿಕ ಜೀವನದ ಗುಟ್ಟು.

Benefits Of Eating Garlic ಸ್ನೇಹಿತರೆ, ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆ ನೀವೆಲ್ಲರೂ ಕೇಳಿರಬಹುದು ಅದೇ ರೀತಿ ನಮ್ಮ ಭಾರತದ ಜನರ ಮನಸ್ಥಿತಿ. ನಿಮಗೆಲ್ಲ ತಿಳಿದಿರುವ ಹಾಗೆ ಬೆಳ್ಳುಳ್ಳಿಯನ್ನು ಅನೇಕರು ಒಳ್ಳೆಯ ಪದಾರ್ಥ ಎಂದು ಬಿಂಬಿಸಿದರೆ, ಮತ್ತೆ ಇನ್ನು ಕೆಲವರು ಅದನ್ನು ಕೆಟ್ಟ ಆಹಾರ ಪದಾರ್ಥ ಎನ್ನುವ ರೀತಿಯಲ್ಲಿ ಬಿಂಬಿಸುತ್ತಾರೆ. ಆದರೆ ಇಲ್ಲಿ ನಾವು ತಿಳಿಯಬೇಕಾದ ಮುಖ್ಯ ಅಂಶ ಅಥವಾ ವಿಷಯ ಏನೆಂದರೆ, ನಾವು ಎಷ್ಟೇ ಅದನ್ನು ಕೆಟ್ಟದ್ದು ಅಥವಾ ಒಳ್ಳೆಯದು ಹೋಲಿಕೆ ಮಾಡಿದರು, ಅದರಿಂದ ದೊರೆಯುವ ಲಾಭಗಳಿಂದ ವಂಚಿತರಾಗಿಯೇ ಉಳಿಯುತ್ತೇವೆ. ನಮ್ಮಲ್ಲಿ ಕೆಲವು ಜನರ ಮನಸ್ಥಿತಿ ಹೇಗೆ ಇದೆ ಎಂದರೆ, ಬೆಳ್ಳುಳ್ಳಿಯನ್ನು ಸೇವಿಸಬಾರದು ಅದು ಕೆಟ್ಟ ಪದಾರ್ಥ ಅದರಿಂದ ನಮ್ಮ ದೇಹಕ್ಕೆ ಲಾಭದ ಬದಲಿಗೆ ನಷ್ಟವೇ ಹೆಚ್ಚಾಗಿ ಇದೆ ಎಂದು ತಿಳಿದಿದ್ದಾರೆ.

ಆದರೆ ಅದು ಸಂಪೂರ್ಣ ಸತ್ಯ ಅಲ್ಲ. ಬೆಳ್ಳುಳ್ಳಿಯು ಒಂದು ಉಪಯುಕ್ತ ಆಹಾರ ಪದಾರ್ಥವಾಗಿದ್ದು ಇದರ ಬಗ್ಗೆ ಹಾಗೂ ಇದರ ಲಾಭಗಳ (Benefits Of Eating Garlic) ಬಗ್ಗೆ ನಾವು ಆಯುರ್ವೇದದಲ್ಲಿ ಹೆಚ್ಚಾಗಿ ತಿಳಿದುಕೊಳ್ಳಬಹುದು. ಹಾಗಾಗಿ ಈ ಒಂದು ಲೇಖನದಲ್ಲಿ ನಾವು ನಿಮಗೆ ಬೆಳ್ಳುಳ್ಳಿ ಯನ್ನು ಸೇವಿಸುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಸಿಕೊಡುತ್ತೇವೆ. ಹಾಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇವೆ. ಈ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಚಾನಲ್ಗೆ ಜಾಯಿನ್ ಆಗಿ. ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ:

ಆರೋಗ್ಯದ ದೃಷ್ಟಿಯಿಂದ ಬೆಳ್ಳುಳ್ಳಿ ಒಂದು ದಿವ್ಯ ಔಷಧ:Benefits Of Eating Garlic.

ನಾವು ಉಪಯುಕ್ತ ಆಹಾರ ಪದಾರ್ಥ ವಾದಂತಹ ಬೆಳ್ಳುಳ್ಳಿಯನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡಿದ್ದೆ ಆದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಮತ್ತೆ ಅನೇಕ ರೀತಿಯ ಲಾಭಗಳು ನಮ್ಮ ದೇಹಕ್ಕೆ ಇವೆ; ಅವುಗಳಲ್ಲಿ;

ದೇಹದಲ್ಲಿ ಸರಿಯಾದ ರೀತಿಯ ರಕ್ತ ಚಲಾವಣೆ:

ಹೌದು ಸ್ನೇಹಿತರೆ, ನಾವು ಸರಿಯಾದ ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿದ್ದೇ ಆದರೆ ಇದು ನಮ್ಮ ದೇಹದಲ್ಲಿ ರಕ್ತದ ಚಲಾವಣೆಯನ್ನು ಸುಗಮವಾಗಿ ನಡೆಯಲು ಸಹಾಯ ಮಾಡುವುದು. ಬೆಳ್ಳುಳ್ಳಿಯ ಮತ್ತೊಂದು ಪ್ರಮುಖ ಉಪಯೋಗ ಏನೆಂದರೆ; ಇದು ರಕ್ತವೂ ಹೆಪ್ಪುಗಟ್ಟುವ ಸಮಸ್ಯೆಯನ್ನು ತಡೆಯುತ್ತದೆ. ಕೆಲವೊಂದು ಸಂದರ್ಭದಲ್ಲಿ ನಮ್ಮ ದೇಹದಲ್ಲಿನ ರಕ್ತವು ಹೆಪ್ಪುಗಟ್ಟದೆ ಇರುವುದು ನಮಗೆ ಸಹಾಯಕಾರಿ ಆಗಬಹುದು, ಅಂತಹ ಸಂದರ್ಭದಲ್ಲಿ ಇದು ರಕ್ತವನ್ನು ನಿಯಂತ್ರಣದಲ್ಲಿ ಇಡುತ್ತದೆ.

Benefits Of Eating Garlic
Benefits Of Eating Garlic:

ನಿಮಗೆಲ್ಲಾ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರದ ಪದ್ಧತಿಯು ಯಾವ ರೀತಿಯಲ್ಲಿ ತಪ್ಪು ದಾರಿಯನ್ನು ಹಿಡಿದಿದೆ ಎಂದು. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯ ಸಂಬಂಧಿ ರೋಗಗಳನ್ನು ನಾವು ಹೆಚ್ಚಾಗಿ ಕಾಣುತ್ತಿದ್ದೇವೆ. ಅದರಲ್ಲೂ ಹಾರ್ಟ್ ಅಟ್ಯಾಕ್, ಕಾರ್ಡಿಯೋ ಅಟ್ಯಾಕ್, ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟುವುದು ( blood clotting), ಇಂತಹ ಅನೇಕ ರೀತಿಯ ಸಮಸ್ಯೆಗಳನ್ನು ನಾವು ನೋಡುತ್ತಿದ್ದೇವೆ. ಇದಕ್ಕೆಲ್ಲ ಬೆಳ್ಳುಳ್ಳಿಯೂ ಬಹಳ ಉಪಯುಕ್ತ ಆಹಾರ ಪದಾರ್ಥ, ಇದು ದೇಹದಲ್ಲಿನ ಎಲ್ಲಾ ರೀತಿಯ ರಕ್ತದ ತಡೆಯನ್ನು ನಿವಾರಿಸುತ್ತದೆ.

ಹೊಟ್ಟೆಗೆ ಸಂಬಂಧಿಸಿದ ಅನೇಕ ರೀತಿಯ ಸಮಸ್ಯೆಗಳು:

ಬೆಳ್ಳುಳ್ಳಿ ಹಾಗೂ ಈರುಳ್ಳಿಯ ಮಹತ್ವವನ್ನು ನಾವು ನಮ್ಮ ಸನಾತನ ಧರ್ಮದ ಮೂಲದಲ್ಲಿ ಹಾಗೂ ನಮ್ಮ ಪುರಾತನ ವೈದ್ಯಕೀಯ ಪುಸ್ತಕಗಳಾದಂತಹ ಆಯುರ್ವೇದದಲ್ಲಿ ಸಹ ನಾವು ಇವುಗಳ ಮಹತ್ವವನ್ನು ಕಾಣಬಹುದು. ಸ್ನೇಹಿತರೆ, ನಿಮಗೆ ಏನಾದರೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಅಂದರೆ ಗ್ಯಾಸ್ ಆಗುವುದು, ಹೊಟ್ಟೆ ನೋಯುವುದು, ಮಲಮೂತ್ರ ಸಂದರ್ಭದಲ್ಲಿ ಹಿಂಬದಿಯ ಉರಿಯುವಿಕೆ, ಇತ್ಯಾದಿ ಅನೇಕ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮಲ್ಲಿ ಇದ್ದರೆ ಅವುಗಳಿಗೆ ಈ ಬೆಳ್ಳುಳ್ಳಿಯು ಒಂದು ರಾಮಬಾಣ ಎಂದು ಹೇಳಬಹುದು.

ಮನುಷ್ಯನ ವೀರ್ಯದಲ್ಲಿನ ಹೆಚ್ಚಳ:

ಪುರಾತನ ಕಾಲದಲ್ಲಿ ನಮ್ಮ ಹಿರಿಯರು ಹೇಳುತ್ತಿದ್ದ ಮಾತೊಂದು ಇಲ್ಲಿ ಹೇಳುತ್ತೇನೆ, ಯಾರು ಸನ್ಯಾಸತ್ವ ಅಥವಾ ಸನ್ಯಾಸಿ ಜೀವನವನ್ನು ಬಯಸಿ ಗೃಹಸ್ಥ ಜೀವನವನ್ನು ತೊರೆದು ಹೋಗುತ್ತಾನೋ, ಅಂತವರು ಈ ಒಂದು ಬೆಳ್ಳುಳ್ಳಿ ಪದಾರ್ಥವನ್ನು ಸೇವಿಸಬಾರದು ಎನ್ನುವ ವಾಡಿಕೆ ಇತ್ತು. ಕಾರಣ ಇದರಲ್ಲಿನ ಅತೀವ ಉದ್ವೇಗ ಪಡಿಸುವ ಗುಣಗಳು, ಸ್ನೇಹಿತರೆ ಬೆಳ್ಳುಳ್ಳಿ ಎನ್ನುವುದು ಒಂದು, ಮನುಷ್ಯನನ್ನು ಅತಿವ ಕಾಮಾಸಕ್ತನಾಗಿ ಮಾಡುವುದರಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಇದನ್ನು ಹೆಚ್ಚಾಗಿ ಸೇವಿಸುವುದರಿಂದ ಮನುಷ್ಯನಲ್ಲಿ ವೀರ್ಯದ ಹೆಚ್ಚಳ ಆಗುತ್ತದೆ. ಆದಕಾರಣ ಇದನ್ನು ಸನ್ಯಾಸಿಗಳಿಗೆ ನಿಷೇಧಿಸಲಾಗಿತ್ತು. ಈಗ ಕೆಲವೊಂದು ಜನ ಆ ತಪ್ಪು ಕಲ್ಪನೆಯನ್ನು ಅಳವಡಿಸಿಕೊಂಡು ಇದನ್ನು ತಮ್ಮ ಆಹಾರ ಪದ್ಧತಿಯಲ್ಲಿ ಕೂಡಿಸಿಕೊಳ್ಳುವುದೇ ಇರುವುದು ವಿಷಾದವೆನಿಸುತ್ತದೆ.

ಬೆಳ್ಳುಳ್ಳಿಯನ್ನು ಎಷ್ಟು ಮತ್ತು ಹೇಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು: Benefits Of Eating Garlic.

ಸ್ನೇಹಿತರೆ, ಬೆಳ್ಳುಳ್ಳಿಯು ಒಂದು ಉಪಯುಕ್ತ ಆಹಾರ ಪದಾರ್ಥ ಆಗಿದ್ದು ಇದರ ಲಾಭಗಳು (Benefits Of Eating Garlic) ತುಂಬಾ ಇವೆ. ಹಾಗಾಗಿ ಇದನ್ನು ಯಾರು ಎಷ್ಟು ಮತ್ತು ಹೇಗೆ ತಿಂದರೆ ಆರೋಗ್ಯಕ್ಕೆ ಇದು ಒಳ್ಳೆಯದು ಎಂದು ತಿಳಿದುಕೊಳ್ಳುವುದು ಒಂದು ಉಪಯುಕ್ತ ಮಾಹಿತಿ. ದಿನನಿತ್ಯ ಎರಡು ಬೆಳ್ಳುಳ್ಳಿಯನ್ನು ಸೇವಿಸುವುದು ದೇಹಕ್ಕೆ ಉತ್ತಮ. ಹಾಗೆಂದ ಮಾತ್ರಕ್ಕೆ ಇದನ್ನು ಹೇಗೆ ಬೇಕು ಹಾಗೆ ಸೇವಿಸುವುದು ಅಲ್ಲ, ಕೆಲವೊಬ್ಬರಿಗೆ ಇದನ್ನು ಬಾಯಿಯಲ್ಲಿ ಅಗಿದು ತಿನ್ನುವುದು ಸಾಧ್ಯವಾಗಿರುವುದಿಲ್ಲ ಆದ್ದರಿಂದ ಅವರು ನೇರವಾಗಿ ಅದನ್ನು ನುಂಗಿ ಬಿಡುತ್ತಾರೆ.
ಸ್ನೇಹಿತರೆ ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಉಪಯುಕ್ತ ರಾಸಾಯನಿಕ ಪದಾರ್ಥ ಇರುತ್ತದೆ ಈ ರೀತಿಯಾಗಿ ಅದನ್ನು ನೇರವಾಗಿ ನುಂಗುವುದರಿಂದ ಅದರಿಂದ ಯಾವುದೇ ರೀತಿಯ ಲಾಭವು ನಮ್ಮ ದೇಹಕ್ಕೆ ದೊರೆಯುವುದಿಲ್ಲ. ಕಾರಣ ಅದು ಅದೇ ರೀತಿಯಾಗಿ ನಮ್ಮ ದೇಹದಿಂದ ಹೊರಗೆ ಹೋಗಿಬಿಡುತ್ತದೆ. ಅದಕ್ಕಾಗಿ ಮೊದಲು ಅದನ್ನು ಬಾಯಿಯಲ್ಲಿ ಸರಿಯಾಗಿ ಆಗಿದು ಅದರ ರಸದ ಜೊತೆ ಜೊತೆಗೆ ಸೇವಿಸಬೇಕು ಹೀಗೆ ಮಾಡಿದಾಗ ಮಾತ್ರ ಅದರಲ್ಲಿರುವ ಅಲಿ ಸೀನ್ ಎಂಬ ರಾಸಾಯನಿಕ ಪದಾರ್ಥವು ಬಿಡುಗಡೆ ಆಗಿ ಅದರ ಸಂಪೂರ್ಣ ಲಾಭ ನಮ್ಮ ದೇಹಕ್ಕೆ ದೊರೆಯುತ್ತದೆ.

ಇದರಿಂದ ನಿರೀಕ್ಷಿಸಬಹುದಾದ ಅಡ್ಡ ಪರಿಣಾಮಗಳು:

  • ಬೆಳ್ಳುಳ್ಳಿಯನ್ನು ಸ್ವಲ್ಪ ಹೆಚ್ಚಿಗೆ ಸೇವಿಸುವುದರಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಉಷ್ಣತೆಯನ್ನು ಉಂಟು ಮಾಡುವುದರಿಂದ ಇದು ದೇಹದಲ್ಲಿ ಉಷ್ಣತೆಗೆ ಕಾರಣವಾಗಬಹುದು.
  • ಇನ್ನೂ ಬೆಳ್ಳುಳ್ಳಿಯೂ ಆಯುರ್ವೇದದಲ್ಲಿ ಹೇಳಿದ ಹಾಗೆ “ರಕ್ತ ಪಿತ್ತ ಪ್ರಕೋಪಕ್” ಇದು ದೇಹದಲ್ಲಿ ಪಿತ್ತದ ಪ್ರಮಾಣವನ್ನು ಹೆಚ್ಚಿಗೆ ಮಾಡುವುದು.

ಈ ಮಾಹಿತಿಗಳನ್ನು ಓದಿ:

Skin Care Tips. ಬಿಳಿಯ ತ್ವಚೆಗಾಗಿ ಏನು ಮಾಡಬೇಕು ಗೊತ್ತಾ? Skin Care Tips In Kannada.

Calcium Deficiency Symptoms In Kannada: ನಿಮ್ಮಲ್ಲಿ ಈ ಲಕ್ಷಣಗಳು ಕಂಡು ಬಂದರೆ, ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದೆ ಎಂದರ್ಥ.

[inline_join_buttons]

[floating_join_buttons]