[ag_menu menu="top menu"]

ಎಚ್ಚರಿಕೆ..! ಮುಖದ ಮೇಲಿನ ಮೋಡವೆಗಳನ್ನು ಒಡೆಯುವವರು. ಇದು ನಿಮ್ಮ ಸಾವಿಗೆ ಕಾರಣವಾಗಬಹುದು..! Death Triangle

Photo of author

[ag_share_buttons]

Death Triangle ಎಚ್ಚರಿಕೆ..! ಮುಖದ ಮೇಲಿನ ಮೋಡವೆಗಳನ್ನು ಒಡೆಯುವವರು. ಇದು ನಿಮ್ಮ ಸಾವಿಗೆ ಕಾರಣವಾಗಬಹುದು..!
ಹದಿಹರೆಯದ ವಯಸ್ಸಿನಲ್ಲಿ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಹಜ. ಈ ರೀತಿ ಕಾಣಿಸಿಕೊಳ್ಳುವ ಮೊಡವೆಗಳನ್ನು ಒಡೆಯುವುದು ಮಾಡಬೇಡಿ. ಇದು ನಿಮ್ಮ ಸಾವಿಗೆ ಕಾರಣವಾಗಬಹುದು. ನಿಮಗೆ ಗೊತ್ತಾ? ನಮ್ಮ ಮುಖದಲ್ಲಿ ಒಂದು ವಿಶೇಷ ತ್ರಿಕೋನಾಕೃತಿಯ ಭಾಗವಿದೆ. ಇದನ್ನು”ಮರಣ ತ್ರಿಕೋನ” ಎಂದು ಕರೆಯಲಾಗುತ್ತದೆ. ಈ ಒಂದು ಲೇಖನದಲ್ಲಿ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ;

ಏನಿದು ಮರಣ ತ್ರಿಕೋನ? What Is Death Triangle?

ಮಾನವನ ಮುಖ ಭಾಗದ ಮೇಲೆ ಒಂದು ವಿಶೇಷ ತ್ರಿಕೋನ ಆಕೃತಿಯ ಭಾಗವಿದೆ ಇದನ್ನೇ ನಾವು ಮರಣ ತ್ರಿಕೋನ ಎಂದು ಕರೆಯುತ್ತೇವೆ. ಈ ಭಾಗವು:

  • ‌ ‌ ಮೂಗಿನ ಮೇಲ್ಬಾಗ
  • ‌ ಮೂಗಿನ ಬದಿಗಳು
  • ‌ ಬಾಯಿಯ ಎರಡು ಬದಿಗಳು
Death Triangle

ಈ ಮೂರು ಅಂಚುಗಳನ್ನು ಸೇರಿಸಿದಾಗ ಅಥವಾ ಜೋಡಿಸಿದಾಗ ಒಂದು ತ್ರಿಕೋನ ರೂಪವಾಗುತ್ತದೆ. ಅದನ್ನೇ ಮರಣ ತ್ರಿಕೋನ (Death Triangle) ಎಂದು ಕರೆಯಲಾಗುತ್ತದೆ.

ಯಾಕೆ ಇದು ಇಷ್ಟು ಅಪಾಯಕಾರಿ ಆಗಿದೆ?

ಸ್ನೇಹಿತರೆ, ಈ ಒಂದು ತ್ರಿಕೋನ ಆಕೃತಿಯ ಭಾಗದಲ್ಲಿ ದೇಹದ ಒಳಗಿನ ರಕ್ತ ವಾಹಿನಿಗಳು ನೇರವಾಗಿ ಮೆದುಳಿನ ರಕ್ತನಾಳಗಳಿಗೆ ಸಂಪರ್ಕವನ್ನು ಹೊಂದಿರುತ್ತವೆ. ಇವುಗಳಲ್ಲಿ ಯಾವುದೇ ರೀತಿಯ ದ್ವಾರಗಳು ಇರುವುದಿಲ್ಲ. ಕಾರಣ, ನೀವು ಯಾವುದೇ ರೀತಿಯ ಸೋಂಕಿನಿಂದ ಪೀಡಿತರಾದರೆ ಇದು ನಿಮ್ಮ ಮೆದಳಿನೊಳಗೆ ನೇರವಾಗಿ ಹರಡಬಹುದು.

ಸೋಂಕು ಅಥವಾ ಸಂಕ್ರಮಣ ಹೇಗೆ ಸಂಭವಿಸುತ್ತದೆ?

ಮೊಡವೆಗಳನ್ನು ಒಡೆದು ಕೊಂಡಾಗ ಅಥವಾ ಚಿವುಟಿಕೊಂಡಾಗ

ಸ್ನೇಹಿತರೆ, ವಯಸ್ಕರ ಮಕ್ಕಳಲ್ಲಿ ಅಂದರೆ ಹದಿಹರೆಯದ ವಯಸ್ಸಿನಲ್ಲಿ ಮಾನವರ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಹಜ. ಈ ರೀತಿಯಾಗಿ ಕಾಣಿಸಿಕೊಂಡ ಮೊಡವೆಗಳನ್ನು ನಾವುಗಳು ಕೈಯಿಂದ ಅವುಗಳನ್ನು ಒತ್ತಿದಾಗ ಅಲ್ಲಿ ರಕ್ತಸ್ರಾವವು ಉಂಟಾಗುತ್ತದೆ. ಹೀಗೆ ಉಂಟಾದ ಗಾಯದ ಮೂಲಕ ಸಂಕ್ರಮಣವು ಮೆದುಳಿನವರೆಗೆ ಹರಡಬಹುದು.

ಅಶುದ್ಧ ವಸ್ತುಗಳಿಂದ ಮುಖವನ್ನು ಮುಟ್ಟಿದಾಗ.

ದಿನನಿತ್ಯದ ಜೀವನದಲ್ಲಿ ನಾವು ಅನೇಕ ರೀತಿಯ ವಸ್ತುಗಳನ್ನು ಮುಟ್ಟುತ್ತಿರುತ್ತೇವೆ. ಹೀಗೆ ಸ್ಪರ್ಶಿಸಿದ ಅಶುದ್ಧ ವಸ್ತುಗಳಿಂದ ನಾವು ಆ ಒಂದು ಗಾಯಗಳನ್ನು ಮುಟ್ಟಿದಾಗ ಅದು ನೇರವಾಗಿ ಮೆದುಳಿನವರೆಗೆ ಹರಡಬಹುದು.

ಮುಖದ ಮೇಲೆ ಕಾಣಿಸಿಕೊಳ್ಳುವ ಚರ್ಮ ಸಮಸ್ಯೆಗಳನ್ನು ನಿರ್ಲಕ್ಷಿಸಿದಾಗ

ಹೌದು ಸ್ನೇಹಿತರೆ, ನಾವುಗಳು ಮುಖದ ಮೇಲೆ ಕಾಣಿಸಿಕೊಳ್ಳುವ ಚರ್ಮದ ಸಮಸ್ಯೆಗಳನ್ನು ನಿರ್ಲಕ್ಷಿಸುವುದರಿಂದ ಬ್ಲಡ್ ಸ್ಟ್ರೀಮ್ ನ ಮೂಲಕ ಮೆದುಳಿಗೆ ಹರಡಬಹುದು.

ಅಪಾಯದ ಮುಖ್ಯ ಲಕ್ಷಣಗಳು ಈ ರೀತಿಯಾಗಿ ಕಾಣಿಸಿಕೊಳ್ಳಬಹುದು

  • ತೀವ್ರ ತಲೆನೋವು
  • ಕಣ್ಣಿನಲ್ಲಿ ಊತ ಅಥವಾ ದೃಷ್ಟಿ ಹಾನಿ
  • ಜ್ವರ ಮತ್ತು ಎದೆ ನೋವು
  • ಮುಖದ ಭಾಗದಲ್ಲಿ ಉರಿ
  • ಉಸಿರಾಟದ ತೊಂದರೆ

ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

Benefits Of Eating Garlic : ದಿನಕ್ಕೆರಡು ಬೆಳ್ಳುಳ್ಳಿ ಸಂಸಾರಿಕ ಜೀವನದ ಗುಟ್ಟು.

ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮಗಳು

  • ಮೊಡವೆ ಅಥವಾ ಗಾಯಗಳನ್ನು ಒತ್ತಬೇಡಿ — ವಿಶೇಷವಾಗಿ ಮೂಗು ಮತ್ತು ಬಾಯಿ ನಡುವಿನ ಭಾಗದಲ್ಲಿ.
  • ಮುಖವನ್ನು ಪ್ರತಿದಿನ ಸ್ವಚ್ಛ ನೀರಿನಿಂದ ತೊಳೆಯಿರಿ.
  • ಕಾಣಿಸಿಕೊಳ್ಳುವ ಚರ್ಮದ ಸಮಸ್ಯೆಗಳಿಗೆ ಮನೆಯಲ್ಲಿ ಚಿಕಿತ್ಸೆ ನೀಡದೆ, ತಕ್ಷಣ ಡರ್ಮಟಾಲಜಿಸ್ಟ್ (ಚರ್ಮರೋಗ ತಜ್ಞರು) ಬಳಿ ಹೋಗಿ.
  • ಚರ್ಮದ ಸೌಂದರ್ಯವರ್ಧಕಗಳನ್ನು ಶುದ್ಧತೆ ಇಲ್ಲದೆ ಉಪಯೋಗಿಸಬೇಡಿ.

ಕೊನೆಯ ಮಾತು:

ಮುಖದ ಈ ಮರಣ ತ್ರಿಕೋನ Death Triangle ಭಾಗ ಅತಿ ಸೂಕ್ಷ್ಮ ಭಾಗ. ಇದರಲ್ಲಿ ಉದಾಸೀನತೆಯನ್ನು ಮಾಡಿದರೆ ಸಣ್ಣ ಮೊಡವೆ ಕೂಡ ನಿಮ್ಮ ಜೀವ ಘಾತಕ ಸ್ಥಿತಿಗೆ ಕಾರಣವಾಗಬಹುದು. ವೈದ್ಯಕೀಯ ಸಲಹೆ ಅಗತ್ಯ.
ಈ ಮಾಹಿತಿ ಉಪಯುಕ್ತ ಎನಿಸಿದರೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಹಾಗೂ ಇತರರಲ್ಲಿ ಹಂಚಿಕೊಳ್ಳಿ. ಉಪಯುಕ್ತ ಮಾಹಿತಿ ದಯವಿಟ್ಟು ಶೇರ್ ಮಾಡುವುದರ ಮೂಲಕ ಹಂಚಿಕೊಳ್ಳಿ.

FaceCareKannada #HealthAwareness #CavernousSinus

[short-code1]

[inline_join_buttons]

[floating_join_buttons]

Leave a Comment