[ag_menu menu="top menu"]

ಮಧ್ಯಪ್ರಿಯರಿಗೆ ಗುಡ್ ನ್ಯೂಸ್..! ಭಾರತದಲ್ಲಿ ಇನ್ಮುಂದೆ ಆಲ್ಕೊಹಾಲ್ ಬೆಲೆ ಇಳಿಕೆ..! Free Trade Agreement ಇಲ್ಲಿದೆ ಸಂಪೂರ್ಣ ಮಾಹಿತಿ.

Photo of author

[ag_share_buttons]

Free Trade Agreement ಮಧ್ಯಪ್ರಿಯರಿಗೆ ಗುಡ್ ನ್ಯೂಸ್..! ಭಾರತದಲ್ಲಿ ಇನ್ಮುಂದೆ ಆಲ್ಕೊಹಾಲ್ ಬೆಲೆ ಇಳಿಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ.


ನಮಸ್ಕಾರ ಕರ್ನಾಟಕದ ಜನತೆಗೆ, ಮಧ್ಯದ ಬೆಲೆಯಲ್ಲಿ ಬಾರೀ ಇಳಿಕೆ..! ಹೌದು ಸ್ನೇಹಿತರೆ ಇನ್ನು ಮುಂದೇ ಭಾರತದಲ್ಲಿ ಆಲ್ಕೊಹಾಲ್ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವದು. ಕಾರಣ ಭಾರತ ಮತ್ತು ಯುಕೆ ನಡುವಿನ ಉಚಿತ ವ್ಯಾಪಾರ ಒಪ್ಪಂದ (FTA –Free Trade Agreement). ಇವತ್ತಿನ ಈ ಒಂದು ಲೇಖನದಲ್ಲಿ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;

ಏನಿದು ಉಚಿತ ವ್ಯಾಪಾರ ಒಪ್ಪಂದ? What Is Free Trade Agreement?

ಉಚಿತ ವ್ಯಾಪಾರ ಒಪ್ಪಂದ ಎಂದರೆ, ಯಾವುದೇ ಎರಡೂ ದೇಶಗಳು ತಮ್ಮ-ತಮ್ಮ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯವಾಗುವಂತೆ ಬೇರೊಂದು ದೇಶದ ಜೊತೆಗೆ ವ್ಯಾಪಾರ, ವಿನಿಮಯ, ರಪ್ತು, ಆಮದು ಹಾಗೂ ಹೂಡಿಕೆಯ ಕ್ಷೇತ್ರಗಳನ್ನು ಪರಿಗಣಿಸಿ ರಾಜತಾಂತ್ರಿಕ ಒಪ್ಪಂದವನ್ನು ಮಾಡಿಕೊಳ್ಳುವದು. ಈ ರೀತಿಯ ಒಪ್ಪಂದದಲ್ಲಿ ಆಯಾ ದೇಶಗಳ ವಸ್ತುಗಳ ಮೇಲೆ ಕಡಿಮೆ ಪ್ರಮಾಣದ ತೆರಿಗೆಯನ್ನು ವಿಧಿಸಲಾಗುವದು. ಇದರಿಂದಾಗಿ ದೇಶ ದೇಶಗಳ ನಡುವಿನ ವ್ಯಾಪಾರ ಸಂಬಂಧವೂ ಸುದಾರಿಸುವುದು ಹಾಗೂ ದೇಶವು ಆರ್ಥಿಕ ಅಭಿವೃದ್ಧಿಯ ಕಡೆಗೆ ಸಾಗುವದು.

[short-code1]

ಆಲ್ಕೊಹಾಲ್ ಬೆಲೆಯಲ್ಲಿ ಇಳಿಕೆ. Reduction In Alcohol Price.

ಹೌದು ಸ್ನೇಹಿತರೆ, ಈ ಒಂದು ಭಾರತ ಯುಕೆ ನಡುವಿನ ಉಚಿತ ವ್ಯಾಪಾರ ಒಪ್ಪಂದದಿಂದ (FTA -Free Trade Agreement) ಭಾರತದಲ್ಲಿ ಮಧ್ಯದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬರುವುದು ( Price Reduction In Alcohol). ಈ ಎರಡು ದೇಶಗಳ ನಡುವಿನ ಹಿಂದಿನ ವರ್ಷದ ವ್ಯಾಪಾರ ವಹಿವಾಟಿನ ಒಟ್ಟು ಮೌಲ್ಯ 41 ಬಿಲಿಯನ್ ಪೌಂಡ್ ನಷ್ಟು. ಭಾರತವು ದೇಶದ 7ನೇ ಅತಿ ದೊಡ್ಡ ಮಾರುಕಟ್ಟೆ ಪಾಲುದಾರ ದೇಶವಾಗಿದೆ. ಈ ಮೊದಲು ಭಾರತವು ಬ್ರಿಟನ್ ಮೂಲಕ ಆಮದು ಮಾಡಿಕೊಳ್ಳುತ್ತಿದ್ದ ಮಧ್ಯದ ಮೇಲೆ ಭಾರತವು 150% ನಸ್ಟು ಟ್ಯಾರಿಫ್ ( ಟ್ಯಾರಿಫ್ ಎನ್ನುವುದು ಒಂದು ವಿಧದ ತೆರಿಗೆ) ವಿಧಿಸಲಾಗುತ್ತಿತ್ತು. ಆದರೆ ಪ್ರಸ್ತುತ ಒಪ್ಪಂದದ ಅನ್ವಯ ಕೇವಲ 75% ನಷ್ಟು ಟ್ಯಾರಿಫ್ ವಿಧಿಸಲಾಗುವುದು. ಇದರಿಂದಾಗಿ ಭಾರತದಲ್ಲಿ ಇದರ ಆಮದು ಹೆಚ್ಚಾಗುವುದು ಹಾಗೂ ಜೊತೆಗೆ ತೆರಿಗೆ ವಿನಾಯಿತಿಯ ಮೂಲಕ ಇದರ ಬೆಲೆಯನ್ನು ಕಡಿಮೆ ಮಾಡಲಾಗುವುದು.

Free-Trade-Agreement

ಆಟೋಮೊಬೈಲ್ ಹಾಗೂ ಫಾರ್ಮಾ ಕ್ಷೇತ್ರದಲ್ಲಿನ ಬೆಳವಣಿಗೆ. Free Trade Agreement

ಈ ಒಂದು ಒಪ್ಪಂದದ ನಂತರ ಭಾರತ ಮತ್ತು ಬ್ರಿಟನ್ ಎರಡು ದೇಶಗಳ ನಡುವೆ ಅಟೋಮೊಬೈಲ್ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ರೀತಿಯ ಸಕಾರಾತ್ಮಕ ಬೆಳವಣಿಗೆಯನ್ನು ನಾವು ಕಾಣಬಹುದು. ಮೊದಲಿಗೆ ಭಾರತವು ಬ್ರಿಟನ್ ದೇಶದ ಮೂಲಕ ಅತಿ ಹೆಚ್ಚಿನ ಪ್ರಮಾಣದ ಆಟೋಮೊಬೈಲ್ಸ್ ಹಾಗೂ ಅದರ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಉಚಿತ ವ್ಯಾಪಾರ ಒಪ್ಪಂದದ ನಂತರ ಈ ರೀತಿ ಆಮದು ಮಾಡಿಕೊಳ್ಳುವ ಬಿಡಿ ಭಾಗಗಳು ಹಾಗೂ ಕಾರುಗಳು ಮತ್ತು ಇನ್ನಿತರ ವಸ್ತುಗಳ ಮೇಲೆ ಆಮದು ಸುಂಕ ಕಡಿಮೆ ಪ್ರಮಾಣದಲ್ಲಿ ವಿಧಿಸಲಾಗುವುದು. ಇದರಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿ ಉಂಟಾಗುವುದು. ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಭಾರತವು ಅತಿ ಪ್ರಮಾಣದ ರಫ್ತು ಹಾಗೂ ಆಮದು ಮಾಡಿಕೊಳ್ಳುವುದು. ಇದರಿಂದ ಭಾರತದ ಪ್ರಮುಖ ಫಾರ್ಮರ್ಸ್ ಟಿಕಲ್ ಔಷಧಿಗಳಿಗೆ ವಿದೇಶಿ ಮಾರುಕಟ್ಟೆ ಒದಗುವ ಜೊತೆಗೆ ಒಳ್ಳೆಯ ಬ್ರಾಂಡಿಂಗ್ ಕೂಡ ಸಿಗುವುದು.

ಈ ಕೆಳಗಿನ ಚಾರ್ಟ್ ಮೂಲಕ ಇನ್ನಷ್ಟು ತಿಳಿಯಿರಿ 👇:

ಇಂಗ್ಲೆಂಡ್ ಮೂಲಕ ಭಾರತವು ಆಮದು ಮಾಡಿಕೊಳ್ಳುತ್ತಿರುವ ವಿವಿಧ ರೀತಿಯ ವಸ್ತುಗಳ ಮೇಲೆ ವಿಧಿಸಲಾಗುವ ತೆರಿಗೆಗಳು ಹಾಗೂ ಒಪ್ಪಂದದ ನಂತರ ವಿಧಿಸಲಾಗುವ ತೆರಿಗೆಗಳು:Free Trade Agreement

ಉತ್ಪನ್ನಗಳುಹಿಂದಿನ ಸುಂಕ (%)FTA ನಂತರದ ಸುಂಕ (%)ಟಿಪ್ಪಣಿ
ಸ್ಕಾಚ್ ವಿಸ್ಕಿ (Scotch Whisky)150%75% → 40% (10 ವರ್ಷಗಳಲ್ಲಿ)ಪ್ರಾರಂಭದಲ್ಲಿ 75% ಗೆ ಕಡಿತ, ನಂತರ 10 ವರ್ಷಗಳಲ್ಲಿ 40% ಗೆ ಇಳಿಕೆ.
ಕಾರುಗಳು (Automobiles)10% (ಕೋಟಾ ಆಧಾರಿತ)ಲಕ್ಸುರಿ ಕಾರುಗಳ ಮೇಲೆ ಸುಂಕ 10% ಗೆ ಇಳಿಕೆ.
ಕಾಸ್ಮೆಟಿಕ್ಸ್ (Cosmetics)10–20%0%ಎಲ್ಲಾ ಕಾಸ್ಮೆಟಿಕ್ ಉತ್ಪನ್ನಗಳ ಮೇಲೆ ಸುಂಕ ರದ್ದು.
ಮೆಡಿಕಲ್ ಸಾಧನಗಳು (Medical Devices)5–8%0–2%ಹೆಚ್ಚಿನ ಸಾಧನಗಳ ಮೇಲೆ ಸುಂಕ 0% ಅಥವಾ 2% ಗೆ ಇಳಿಕೆ.
ವಿಮಾನ ಭಾಗಗಳು (Aerospace Parts)5–10%0%ವಿಮಾನ ಭಾಗಗಳ ಮೇಲೆ ಸುಂಕ ರದ್ದು.
ಲ್ಯಾಂಬ್ ಮಾಂಸ (Lamb Meat)33%0%ಲ್ಯಾಂಬ್ ಮಾಂಸದ ಮೇಲೆ ಸುಂಕ ಸಂಪೂರ್ಣ ರದ್ದು.
ಚಾಕೊಲೇಟ್, ಬಿಸ್ಕಟ್, ಸಾಫ್ಟ್ ಡ್ರಿಂಕ್ಸ್10–20%0%ಈ ಆಹಾರ ಉತ್ಪನ್ನಗಳ ಮೇಲೆ ಸುಂಕ ರದ್ದು.

ಗಮನಿಸಬೇಕಾದ ಅಂಶ: ಇಲ್ಲಿ ಹೇಳಲಾದ ವಿಭಿನ್ನ ರೀತಿಯ ಹೆಸರುಗಳು ಬಗ್ಗೆ; ಯುಕೆ, ಬ್ರಿಟನ್, ಹಾಗೂ ಇಂಗ್ಲೆಂಡ್ ಈ ಎಲ್ಲಾ ದೇಶಗಳು  ಒಂದೇ.

[short-code2]

[inline_join_buttons]

[floating_join_buttons]

Leave a Comment