₹500 Note Legal Tender Kannada: ₹500 ನೋಟು ಇನ್ನೂ ಮಾನ್ಯವೇ ಅಥವಾ ರದ್ದಾಗುತ್ತದೆಯೇ?: ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ₹2000 ಮುಖಬೆಲೆಯ ನೋಟುಗಳನ್ನು ಹಿಂತೆಗೆದ ಬಳಿಕ, ದೊಡ್ಡ ನೋಟುಗಳ ಕುರಿತು ಯಾರಾದರೂ ಏನಾದರೂ ಸುದ್ದಿ ಹಂಚಿಕೊಂಡರೆ ಜನ ಆತಂಕಗೊಳ್ಳುವುದು ಸಹಜ.
ಈಗ ಮತ್ತೆ ‘ಎಟಿಎಂಗಳಲ್ಲಿ ₹500 ನೋಟು ಸಿಗುವುದಿಲ್ಲ’ ಎಂಬ ರೀತಿಯ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಿದಾಡುತ್ತಿವೆ. ಇದರ ಪರಿಣಾಮವಾಗಿ, ಜನರ ಮನದಲ್ಲಿ ₹500 ನೋಟು ಕೂಡ ತೆರವುಗೊಳ್ಳುತ್ತದೆಯೇ ಎಂಬ ಗೊಂದಲ ಹೆಚ್ಚಾಗಿದೆ. ಈ ಎಲ್ಲಾ ಅನುಮಾನಗಳಿಗೆ ತಕ್ಕಂತೆ ಉತ್ತರ ನೀಡಲು ಕೇಂದ್ರ ಸರ್ಕಾರ ಮುಕ್ತವಾಗಿ ಸ್ಪಷ್ಟನೆ ನೀಡಿದ್ದು, ಇದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
ಏನಿದು ₹500 ಮಾಹಿತಿ? ₹500 Note Legal Tender Kannada
ಪ್ರಸ್ತುತ ಚಲಾವಣೆಯಲ್ಲಿ ಇರುವ ಏಕೈಕ ದೊಡ್ಡ ಮುಖಬೆಲೆಯ ನೋಟು ಎಂದರೆ ₹500 ಮಾತ್ರ. ನಮಗೆಲ್ಲ ತಿಳಿದಿರುವ ಹಾಗೆ, 2016 ರಲ್ಲಿ ಕೇಂದ್ರ ಸರ್ಕಾರ ಹಳೆಯ ₹1000 ಮತ್ತು ₹500 ನೋಟುಗಳನ್ನು ರದ್ದುಗೊಳಿಸಿ, ಅದಕ್ಕೆ ಬದಲಾಗಿ ಹೊಸ ₹500 ಮತ್ತು ₹2000 ನೋಟುಗಳನ್ನು ಪರಿಚಯಿಸಿತ್ತು. ಆದರೆ, ಈಗಾಗಲೇ ₹2000 ನೋಟುಗಳನ್ನೂ ಹಿಂದಕ್ಕೆ ತೆಗುದುಕೊಂಡಿದೆ, ಅಕ್ರಮ ಕಪ್ಪು ಹಣವನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿತ್ತು. ಈ ಎಲ್ಲಾ ಕ್ರಮಗಳಿಂದ ದೊಡ್ಡ ಮುಖಬೆಲೆಯ ನೋಟುಗಳ ಭವಿಷ್ಯ ಯಾವಾಗ ಏನೆಂದು ಹೇಳಲು ಆಗದಂತ ಸ್ಥಿತಿ ಉಂಟಾಗಿದೆ. ಹೀಗಾಗಿ, (₹500 Note Legal Tender Kannada) ಈಗ ₹500 ನೋಟಿಗೆ ಸಂಬಂಧಿಸಿದ ಯಾವುದೆ ಸುದ್ದಿ ಬಂದರು ಜನ ಆತಂಕಕ್ಕೆ ಒಳಗಾಗುತ್ತಿದ್ದಾರೆ.
ಅಂಚೆ ಕಚೇರಿ ಫ್ರಾಂಚೈಸ್ ಮೂಲಕ ಹಣ ಹೇಗೆ ಸಂಪಾದಿಸಬಹುದು? ತಿಂಗಳಿಗೆ 50,000 ಆದಾಯ..!
ಇತ್ತೀಚೆಗೆ ‘₹500 ನೋಟನ್ನು ಕೂಡ ರದ್ದುಮಾಡಿ ಮುಂದೆ ಕೇವಲ ₹200 ಹಾಗೂ ₹100 ಮುಖಬೆಲೆಯ ನೋಟುಗಳನ್ನಷ್ಟೇ ಚಲಾವಣೆಯಲ್ಲಿ ಇರಿಸಲಿದ್ದಾರೆ’ ಎಂಬ ಮಾತುಗಳು ಎಲ್ಲೆಂದರಲ್ಲಿ ಕೇಳಿಬರುತ್ತಿವೆ. ಇದಕ್ಕೂ ಮುನ್ನ ‘ಎಟಿಎಂಗಳಲ್ಲಿ ₹500 ನೋಟು ವಿತರಿಸದಂತೆ ಬ್ಯಾಂಕುಗಳಿಗೆ ಆರ್ಬಿಐ ಸೂಚನೆ ನೀಡಿದೆ’ ಎಂಬ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಜನರ ಮನಸ್ಸಿನಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಪರಿಣಾಮವಾಗಿ, ಕೆಲವರು ಮೊದಲಿನ ರೀತಿಯಲ್ಲಿ ₹500 ನೋಟು ಕೂಡ ಹಿಂತೆಗೆದುಕೊಳ್ಳುತ್ತಾರೆ ಎನ್ನುವ ಭೀತಿಯಲ್ಲಿ ಅದನ್ನು ಬೇಗ ಬೇಗನೇ ವಿನಿಮಯ ಮಾಡಿಕೊಳ್ಳಲು ಬ್ಯಾಂಕುಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಬ್ಯಾಂಕುಗಳಲ್ಲಿ ಗ್ರಾಹಕ ಸೇವಾ ಸಮಸ್ಯೆಗಳು ಹೆಚ್ಚಾಗುತ್ತಿವೆ.
“ಕೇಂದ್ರ ಸರ್ಕಾರದ ಸ್ಪಷ್ಟನೆ – ಸುಳ್ಳು ಸುದ್ದಿಗಳಿಗೆ ಬಲಿಯಾಗಬೇಡಿ”

ಸೈಬರ್ ಅಪರಾಧಿಗಳು ಮುಗ್ದ ಜನರನ್ನು ಉದ್ದೇಶಿಸಿಕೊಂಡು ಸುಳ್ಳು ವದಂತಿಗಳನ್ನು ವ್ಯಾಪಕವಾಗಿ ಹರಡುತ್ತಿರುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಎಟಿಎಂಗಳಿಂದ ₹500 ನೋಟುಗಳ ವಿತರಣೆಯನ್ನು ಸೆಪ್ಟೆಂಬರ್ 30, 2025ರ ಒಳಗೆ ಸ್ಥಗಿತಗೊಳಿಸಲು ಆರ್ಬಿಐ ಬ್ಯಾಂಕುಗಳಿಗೆ ಆದೇಶ ನೀಡಿದೆ ಎಂಬ ನಕಲಿ (ಸುಳ್ಳು) ಮೆಸೇಜ್ಗಳು ವಾಟ್ಸಾಪ್ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸುತ್ತಾಡುತ್ತಿವೆ. ಇಂತಹ ಸುಳ್ಳು ವದಂತಿಗಳನ್ನು ನಂಬಿ ಹಲವರು ತಮ್ಮ ₹500 ನೋಟುಗಳನ್ನು ಬೇಗನೇ ₹200 ಅಥವಾ ₹100 ನೋಟುಗಳಿಗೆ ಬದಲಾಯಿಸಿಕೊಳ್ಳಲು ಬ್ಯಾಂಕುಗಳಿಗೆ ಧಾವಿಸುತ್ತಿರುವುದು ವರದಿಯಾಗಿದೆ..
ಆದರೆ, ಈ ಸುದ್ದಿಗಳಿಗೆ ಯಾವುದೇ ರೀತಿಯ ಸಾಕ್ಷಿಗಳಿಲ್ಲ ಇದೆಲ್ಲ ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ತಿಳಿಸಿದೆ. ಸುಳ್ಳು ಸುದ್ದಿಗೆ ದಾಸರಾಗದೇ ಎಚ್ಚರಿಕೆಯಿಂದ ಇರಬೇಕೆಂದು ಕೂಡ ಸರ್ಕಾರ ಮನವಿ ಮಾಡಿದೆ.
“ಪಿಐಬಿ ಫ್ಯಾಕ್ಟ್ ಚೆಕ್ – ಸುಳ್ಳು ಸಂದೇಶಗಳಿಗೆ ಬಲಿಯಾಗಬೇಡಿ ”
ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ವಾಟ್ಸಾಪ್ ಮೂಲಕ ತಪ್ಪು ಮಾಹಿತಿಯನ್ನು ಪಸರಿಸುತ್ತಿರುವ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪಿಐಬಿ (PBI) ಫ್ಯಾಕ್ಟ್ ಚೆಕ್ ವಿಭಾಗವು ಎಕ್ಸ್ (ಹಿಂದಿನ ಟ್ವಿಟರ್) ಮೂಲಕ ಹಂಚಿಕೊಂಡಿದೆ. ₹500 ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿಯೇ ಮುಂದುವರಿಯುತ್ತವೆ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದ್ದು, ಇಂತಹ ಸುಳ್ಳು ವದಂತಿಗಳನ್ನು ನಂಬಬಾರದು ಎಂದು ತಿಳಿಸಿದೆ.
ಏನೆಂದರೆ, ಯಾವುದೇ ಸುದ್ದಿಯನ್ನು ನಂಬುವುದಕ್ಕೂ ಮುನ್ನ ಸರ್ಕಾರದ ಅಧಿಕೃತ ಮೂಲಗಳಿಂದ ದೃಢೀಕರಿಸಿಕೊಳ್ಳುವುದು ಬಹಳ ಮುಖ್ಯ. ಅದೇ ರೀತಿ ಪರಿಶೀಲಿಸದೆ ಆ ಸುದ್ದಿಯನ್ನು ಇತರರಿಗೆ ಹಂಚಬಾರದು ಎಂಬುದಾಗಿ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಎಟಿಎಂಗಳಲ್ಲೂ ಹಾಗೆಯೇ ಬ್ಯಾಂಕುಗಳಲ್ಲೂ ₹500 ನೋಟುಗಳು ಎಂದಿಗೂ ಲಭ್ಯವಿರುತ್ತವೆ (₹500 Note Legal Tender Kannada) ಎಂದು ಮತ್ತೊಮ್ಮೆ ತಿಳಿಸಿದ್ದು, ಜನರು ಏಕಾಏಕಿ ಆತಂಕಕ್ಕೆ ಒಳಗಾಗಬಾರದು ಎಂದು ಸ್ಪಷ್ಟನೆ ನೀಡಿದೆ. ಈ ಮೂಲಕ ಜನರ ಮನದಾಳದ ಗೊಂದಲಕ್ಕೆ ತಕ್ಷಣವೇ ತೆರೆ ಎಳೆದಿದೆ.
